ಬೆಂಗಳೂರು: ದೊಡ್ಮನೆ ಕುಡಿ ಯುವರಾಜ್ ಕುಮಾರ್ ಮೊದಲ ಸಿನಿಮಾವೇ ಬಿಡುಗಡೆಯಾಗಿಲ್ಲ. ಹಾಗಿದ್ದರೂ ಯುವ ಮೇಲೆ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯಿದೆ. ಯುವರಾಜ್ ಕುಮಾರ್ ಈಗ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ನಡುವೆ ಅವರು ಟಿ.ಎಸ್. ನಾಗಾಭರಣ ಅವರ ಐತಿಹಾಸಿಕ ಸಿನಿಮಾಗೆ ನಾಯಕರಾಗುವ ಮಾತು ಕೇಳಿಬರುತ್ತಿದೆ. ನಾಗಾಭರಣ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜೀವನ ಕುರಿತಾಗಿ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಈ ಸಿನಿಮಾದಲ್ಲಿ ಯುವರಾಜ್ ಕುಮಾರ್ ಅವರನ್ನೇ ಕೆಂಪೇಗೌಡರ ಪಾತ್ರಕ್ಕೆ