ಬೆಂಗಳೂರು: ಡಾ.ರಾಜ್ ಮೊಮ್ಮಗ ಯುವರಾಜ್ ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಸಿನಿಮಾದ ಟೈಟಲ್ ಮತ್ತು ಟೀಸರ್ ಲಾಂಚ್ ಆಗಿದೆ. ಟೀಸರ್ ನೋಡಿ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಯುವರಾಜ್ ಕುಮಾರ್ ಅವರ ಈ ಸಿನಿಮಾಗೆ ‘ಯುವ ರಣಧೀರ ಕಂಠೀರವ’ ಎಂದು ಹೆಸರಿಡಲಾಗಿದೆ. ಟೀಸರ್ ನಲ್ಲೇ ಇದು ಐತಿಹಾಸಿಕ ಸಿನಿಮಾ ಎಂಬುದು ಪಕ್ಕಾ ಆಗಿದೆ. ಈ ಸಿನಿಮಾಗೆ ಅವರು ಅಷ್ಟೇ ಪೂರ್ವ ತಯಾರಿ ಮಾಡಿದ್ದಾರೆ ಎಂಬುದು ಎದ್ದು ಕಾಣುತ್ತಿದೆ. ಇನ್ನು, ಟೀಸರ್ ಗೆ