ಬೆಂಗಳೂರು: ಇಂದಿನಿಂದ ಒಟಿಟಿ ಫಾರ್ಮ್ಯಾಟ್ ನಲ್ಲಿ ಯುವರತ್ನ ಬಿಡುಗಡೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅಭಿಮಾನಿಗಳಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಪಷ್ಟನೆ ನೀಡಿದ್ದಾರೆ.‘ವ್ಯಾಪಾರದ ದೃಷ್ಟಿಯಿಂದ ಕೆಲವೊಂದು ಹೊಸ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ. ಸದ್ಯಕ್ಕೆ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶವಿರುವುದರಿಂದ ಚಿತ್ರಮಂದಿರವೊಂದರಿಂದಲೇ ಲಾಭ ಗಳಿಕೆ ಸಾಧ್ಯವಿಲ್ಲ. ಈ ಕಾರಣಕ್ಕೆ ಸಿನಿಮಾ ಎಲ್ಲರಿಗೂ ತಲುಪಲಿ ಎಂದು ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಿರುವುದಾಗಿ ಪುನೀತ್ ಹೇಳಿದ್ದಾರೆ.ಬಿಡುಗಡೆಯಾದ ಒಂದೇ ವಾರಕ್ಕೆ ಯುವರತ್ನ ಅಮೆಝೋನ್ ಪ್ರೈಮ್ ನಲ್ಲಿ