ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಪ್ರಮೋಷನ್ ವಿಶೇಷವಾಗಿಯೇ ನಡೆಯಲಿದೆ ಎಂದು ಈಗಾಗಲೇ ಓದಿರುತ್ತೀರಿ. ಅದು ಹೇಗೆ ಎನ್ನುವ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ.ಫೆಬ್ರವರಿ 15 ರಿಂದ ಚಿತ್ರ ಬಿಡುಗಡೆಯಾಗುವವರೆಗೆ ‘ಯುವರತ್ನ ಕ್ಲಾಸ್’ ನಡೆಯಲಿದೆ. ಯುವರತ್ನ ಸಿನಿಮಾ ಎಲ್ಲರಿಗೂ ಗೊತ್ತಿರುವ ಹಾಗೆ ಯೂಥ್ ಫುಲ್ ಕತೆಯಿರುವ ಸಿನಿಮಾ. ದಿಗಂತ್, ಸೋನು ಗೌಡ, ಅವಿನಾಶ್, ಗುರುದತ್ ಸೇರಿದಂತೆ ಅನೇಕ ನಟ ನಟಿಯರನ್ನು ಬಳಸಿಕೊಂಡು ಅವರ ಕಾಲೇಜು ದಿನಗಳ