ದಾಖಲೆಯ ಮೊತ್ತಕ್ಕೆ ಒಟಿಟಿಗೆ ಮಾರಾಟವಾದ ಯುವರತ್ನ

ಬೆಂಗಳೂರು| Krishnaveni K| Last Modified ಶುಕ್ರವಾರ, 9 ಏಪ್ರಿಲ್ 2021 (09:01 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ದಾಖಲೆಯ ಮೊತ್ತಕ್ಕೆ ಅಮೆಝೋನ್ ಪ್ರೈಮ್ ಗೆ ಮಾರಾಟವಾಗಿದೆ ಎನ್ನಲಾಗಿದೆ.

 
ಬಿಡುಗಡೆಯಾದ ಒಂದೇ ವಾರಕ್ಕೆ ಒಟಿಟಿ ಫಾರ್ಮ್ಯಾಟ್ ನಲ್ಲಿ ಪ್ರಸಾರವಾಗುವ ಮೂಲಕ ಹೊಸ ದಾಖಲೆ ಮಾಡಲಿದೆ. ಇದರ ಜೊತೆಗೆ ಅಮೆಝೋನ್ ಪ್ರೈಮ್ ಹೊಚ್ಚ ಹೊಸ ಸಿನಿಮಾಗೆ ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಕಾಣದಂತೆ ಮೊತ್ತಕ್ಕೆ ಮಾರಾಟ ಹಕ್ಕು ಖರೀದಿ ಮಾಡಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ 28 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ.
 
ಆದರೆ ಪುನೀತ್ ಫ್ಯಾನ್ಸ್ ಮಾತ್ರ ಚಿತ್ರತಂಡದ ಈ ನಿರ್ಧಾರದಿಂದ ಬೇಸರಗೊಂಡಿದ್ದಾರೆ. ಇಷ್ಟು ಬೇಗ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಬಾರದಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಆದರೆ ಕೊರೋನಾದಿಂದಾಗಿ ಶೇ.50 ಪ್ರೇಕ್ಷಕರಿಗೆ ಮಾತ್ರ ಥಿಯೇಟರ್ ನಲ್ಲಿ ಅವಕಾಶವಿರುವುದರಿಂದ ಚಿತ್ರತಂಡ ಇಂತಹದ್ದೊಂದು ನಿರ್ಧಾರಕ್ಕೆ ಬರಬೇಕಾಗಿದೆ.
ಇದರಲ್ಲಿ ಇನ್ನಷ್ಟು ಓದಿ :