ಬೆಂಗಳೂರು: ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿ ಅವಾರ್ಡ್ ಸೈಮಾಗೆ ಕನ್ನಡದ ಮೂರು ಸಿನಿಮಾಗಳು ಪ್ರಮುಖವಾಗಿ ಗರಿಷ್ಠ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿವೆ.ದರ್ಶನ್ ನಾಯಕರಾಗಿರುವ ರಾಬರ್ಟ್ ಸಿನಿಮಾ 10 ವಿಭಾಗಗಳಲ್ಲಿ, ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಗರುಡಗಮನ ವೃಷಭ ವಾಹನ 8 ವಿಭಾಗಗಳಲ್ಲಿ ಮತ್ತು ಪುನೀತ್ ರಾಜ್ ಕುಮಾರ್ ನಾಯಕರಾಗಿರುವ ಯುವರತ್ನ ಸಿನಿಮಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.ತೆಲುಗು ಸಿನಿಮಾ ರಂಗದಿಂದ ಪುಷ್ಪ 12 ವಿಭಾಗಗಳಲ್ಲಿ ನಾಮ ನಿರ್ದೇಶನಗೊಳ್ಳುವ ಮೂಲಕ ಅತೀ ಹೆಚ್ಚು