ಒಟಿಟಿಯಲ್ಲೂ ಬಿಡುಗಡೆಯಾಗಲಿದೆ ‘ಯುವರತ್ನ’

ಬೆಂಗಳೂರು| Krishnaveni K| Last Modified ಮಂಗಳವಾರ, 12 ಜನವರಿ 2021 (09:17 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸಿನಿಮಾ ಏಪ್ರಿಲ್ 1 ರಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗುವುದು ಈಗಾಗಲೇ ಎಲ್ಲರಿಗೂ ಗೊತ್ತಿದೆ.

 
ಇದೀಗ ಈ ಸಿನಿಮಾ ಒಟಿಟಿ ಫಾರ್ಮ್ಯಾಟ್ ನಲ್ಲೂ ಬಿಡುಗಡೆಯಾಗಲಿದೆ ಎಂಬ ಸುದ್ದಿ ಬಂದಿದೆ. ಮೂಲಗಳ ಪ್ರಕಾರ ಯುವರತ್ನ ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಭಾರೀ ಮೊತ್ತಕ್ಕೆ ಅಮೆಝೋನ್ ಪ್ರೈಮ್ ಸಿನಿಮಾ ಖರೀದಿ ಮಾಡಿದೆ ಎನ್ನಲಾಗಿದೆ. ಆದರೆ ಥಿಯೇಟರ್ ನಲ್ಲಿ ಮೊದಲು ಪ್ರದರ್ಶನಗೊಂಡು ಆ ಬಳಿಕವಷ್ಟೇ ಒಟಿಟಿ ಫಾರ್ಮ್ಯಾಟ್ ನಲ್ಲಿ ಪ್ರದರ್ಶನವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :