ಈ ವಾರ ಶಿಕಾರಿ, ಗೋವಿಂದಾಯ ನಮಃ ತೆರೆಗೆ

SUJENDRA


ಶಿಕಾರಿ...
ಮಮ್ಮುಟ್ಟಿ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರುವ ಚಿತ್ರ ಶಿಕಾರಿ. ಈ ಹಿಂದೆ ಗುಬ್ಬಚ್ಚಿಗಳು ಚಿತ್ರ ನಿರ್ದೇಶಿಸಿದ್ದ ಶಿಕಾರಿಯ ನಿರ್ದೇಶಕರು. ಮಮ್ಮುಟ್ಟಿಯವರ ಚಿತ್ರವನ್ನು ಹೆಮ್ಮೆಯಿಂದಲೇ ನಿರ್ಮಿಸಿರುವವರು ಕೆ. ಮಂಜು.

ಸ್ವತಃ ಮಮ್ಮುಟ್ಟಿ ಡಬ್ಬಿಂಗ್ ಮಾಡಿರುವ ಶಿಕಾರಿ ಚಿತ್ರ ಮಲಯಾಳಂನಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಪ್ರೇಕ್ಷಕರಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಮರ್ಶಕರಿಂದಲೂ ಟೀಕೆಗೆ ಗುರಿಯಾಗಿದೆ. ಆದರೂ ಕನ್ನಡದಲ್ಲೇ ನಿರ್ಮಿಸಲಾಗಿರುವುದರಿಂದ, ಇಲ್ಲಿ ಗೆಲ್ಲುತ್ತದೆ ಎಂಬ ಭರವಸೆ ಚಿತ್ರತಂಡದ್ದು.

ನಾಗರಾಜ ಬಿ.|
ಮಮ್ಮುಟ್ಟಿಯವರದ್ದು ಇಲ್ಲಿ ದ್ವಿಪಾತ್ರ. ನಾಯಕಿಯಾಗಿ ಪೂನಮ್ ಬಾಜ್ವಾ ಅಭಿನಯಿಸಿದ್ದಾರೆ. ಉಳಿದಂತೆ ಡೆಡ್ಲಿ ಆದಿತ್ಯ, ಮೋಹನ್, ನೀನಾಸಂ ಅಶ್ವತ್ಥ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ. ಸಂಗೀತ ವಿ. ಹರಿಕೃಷ್ಣ ಅವರದ್ದು.


ಇದರಲ್ಲಿ ಇನ್ನಷ್ಟು ಓದಿ :