ಮಾಸ್ತಿಗುಡಿ ಚಿತ್ರ ಬಿಡುಗಡೆಗೆ ಒಂದು ದಿನ ಮುನ್ನವೇ ಉದಯ್,, ಅನಿಲ್ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ವಿತರಣೆ

ಬೆಂಗಳೂರು| venu| Last Updated: ಗುರುವಾರ, 11 ಮೇ 2017 (21:10 IST)
ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಾಹಸ ಚಿತ್ರ ಚಿತ್ರೀಕರಣದ ವೇಳೆ ಮೃತಪಟ್ಟ ಸಾಹಸ ಕಲಾವಿದರಾದ ಉದಯ್ ಮತ್ತು ಅನಿಲ್ ಅವರಿಗೆ ಚಿತ್ರತಂಡ 20 ಲಕ್ಷ ರೂ. ಬಾಂಡ್ ನೀಡಿದೆ.
ಫಿಲ್ಮ್ ಚೇಂಬರ್`ನಲ್ಲಿ ಉದಯ್ ತಂದೆ ವೆಂಕಟೇಶ್ ಅವರಿಗೆ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಬಾಂಡ್ ವಿತರಿಸಿದರು. ನಾಳೆ ಚಿತ್ರ ಬಿಡುಗಡೆಯಾಗುತ್ತಿದ್ದು, ಇಂದೇ ಪರಿಹಾರದ ಬಾಂಡ್ ವಿತರಿಸಲಾಗಿದೆ. ಈ ಸಂದರ್ಭ ನಟ ದುನಿಯಾ ವಿಜಯ್, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹಾಜರಿದ್ದರು.>  > ಯಾವುದೇ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯತೆ ದೃಷ್ಟಿಯಿಂದ 25 ಲಕ್ಷ ಪರಿಹಾರ ನೀಡಲು ಸೂಚಿಸಿದ್ದೆವು. ಚಿತ್ರತಂಡ ತಲಾ 20 ಲಕ್ಷ ರೂಪಾಯಿ ಬಾಂಡ್ ನೀಡಲು ಒಪ್ಪಿಗೆ ಸೂಚಿಸಿದೆ.  ಸರ್ಕಾರ ತಲಾ 5 ಲಕ್ಷ ರೂ. ಮತ್ತು ಸಾಹಸ ನಿರ್ದೇಶಕ ರವಿವರ್ಮಾ 5 ಲಕ್ಷ ರೂ ಪರಿಹಾರ ನೀಡಿದ್ದಾರೆ. 20 ಲಕ್ಷ ರೂ. ಬಾಂಡ್`ನಿಂದ ತಿಂಗಳಿಗೆ 20 ಸಾವಿರ ಬಡ್ಡಿ ಬರಲಿದೆ ಎಂದು ತಿಳಿಸಿದರು.  
 


ಇದರಲ್ಲಿ ಇನ್ನಷ್ಟು ಓದಿ :