ಮೆಗಾಸ್ಟಾರ್ ಚಿರಂಜೀವಿ ಈಗ ಖೈದಿ ನಂ.1

Hyderabad| Krshnaveni K| Last Modified ಶನಿವಾರ, 3 ಡಿಸೆಂಬರ್ 2016 (08:22 IST)
ಹೈದರಾಬಾದ್: ತೆಲುಗಿನ ಮೆಗಾಸ್ಟಾರ್ ಚಿರಂಜೀವಿ 9 ವರ್ಷಗಳ ನಂತರ ಬಣ್ಣ ಹಚ್ಚುತ್ತಿದ್ದಾರೆ. ಅದೂ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಖೈದಿ ನಂ.1 ಎನ್ನುವ ಅವರ ಹೊಸ ಚಿತ್ರದ ಬಗ್ಗೆ ಹೈಪ್ ಕ್ರಿಯೇಟ್ ಆಗಿದೆ.

ವಿ.ವಿ. ನಾಯಕ್ ನಿರ್ದೇಶನದ ಮುಂದಿನ ವರ್ಷ ಈ ಚಿತ್ರ ತೆರೆ ಕಾಣುವುದು. ಆದರೂ, ಈಗಲೇ ಅದು
ಭಾರೀ ಪ್ರಚಾರ ಪಡೆದುಕೊಂಡಿದೆ. ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಚಿತ್ರದ ನಿರ್ಮಾಪಕರಲ್ಲೊಬ್ಬರು. ಅವರು ಅಪ್ಪನ ಸಿನಿಮಾದ ಒಂದು ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವುದು ವಿಶೇಷ. ಅಲ್ಲದೆ ಕನ್ನಡದ ಲಕ್ಷ್ಮೀ ರೈ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಬಂದಿದ್ದಾರೆ.


ಈಗಾಗಲೇ ಇದರ ಟೀಸರ್ ಬಿಡುಗಡೆಯಾಗಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೇ ಚಿರಂಜೀವಿ ಬೆನ್ನುತಟ್ಟಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿಗೆ ಇಬ್ಬರು ನಾಯಕಿರದ್ದಾರೆ. ರಾಮ್ ಚರಣ್ ಮೊದಲ ಚಿತ್ರ ಹೀರೋಯಿನ್ ಕಾಜಲ್ ಅಗರ್ ವಾಲ್ ಇಲ್ಲಿ ಅಪ್ಪ ಚಿರಂಜೀವಿ ಅವರ ನಾಯಕಿಯರಿಬ್ಬರಲ್ಲಿ ಒಬ್ಬರು. ಇನ್ನೊಬ್ಬರು ಶ್ರೇಯಾ ಸರಣ್.


ಮುಂದಿನ ವರ್ಷ ತೆರೆ ಕಾಣಲಿರುವ ಮೆಗಾ ಮೂವಿಗಳಲ್ಲಿ ಮೆಗಾಸ್ಟಾರ್ ನ ಈ ಸಿನಿಮಾವೂ ಒಂದು.


ಇದರಲ್ಲಿ ಇನ್ನಷ್ಟು ಓದಿ :