ನಾಳೆ ಚಂದನವನದಲ್ಲಿ ಹೊಸ-ಹಳೆ ಸಿನಿಮಾಗಳ ಸಮಾಗಮ

Bangalore| Krishnaveni K| Last Modified ಗುರುವಾರ, 1 ಡಿಸೆಂಬರ್ 2016 (09:22 IST)
ಬೆಂಗಳೂರು: ನಾಳೆ ಕನ್ನಡ ಚಿತ್ರ ವೀಕ್ಷಕರಿಗೆ ಹಳೆ-ಹೊಸ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುವ ಅವಕಾಶವಿದೆ. ಹಳೇ ಸಿನಿಮಾ ಇಷ್ಟಪಡುವವರು ರವಿಚಂದ್ರನ್ ಅಭಿನಯದ ಅಂಜದ ಗಂಡು ನೋಡಬಹುದು. ಹೊಸ ಸಿನಿಮಾ ನೋಡುವವರು ಅಭಿನಯದ ಮಮ್ಮಿ ನೋಡಬಹುದು.

ಆಯ್ಕೆ ನಿಮ್ಮದು. 1998 ರಲ್ಲಿ ಸೂಪರ್ ಹಿಟ್ ಆಗಿದ್ದ ಅಂಜದ ಗಂಡು ಹೊಸ ತಂತ್ರಜ್ಞಾನದೊಂದಿಗೆ ನಾಳೆ ರಿ ರಿಲೀಸ್ ಆಗಲಿದೆ. ಖುಷ್ಬೂ ಹಾಗೂ ರವಿಚಂದ್ರನ್ ಜೋಡಿ ಮಾಡಿದ ಮೋಡಿ ಮರೆಯಲು ಸಾಧ್ಯವೇ? ಟಿವಿಯಲ್ಲಿ ಎಷ್ಟು ಬಾರಿ ಪ್ರಸಾರವಾದರೂ, ಹೊಸ ತಂತ್ರಜ್ಞಾನದೊಂದಿಗೆ ದೊಡ್ಡ ಪರದೆಯಲ್ಲಿ ನೋಡುವ ಆಸಕ್ತರಿಗಾಗಿ ನಿರ್ಮಾಪಕ ಬಿ.ಎನ್. ಗಂಗಾಧರ್ ಅವಕಾಶ ಮಾಡಿಕೊಡುತ್ತಿದ್ದಾರೆ.


ಇನ್ನು ಹಾರರ್ ಚಿತ್ರ ನೋಡಲು ಬಯಸುವವರು ಪ್ರಿಯಾಂಕ ಉಪೇಂದ್ರರ ಮಮ್ಮಿ ಸಿನಿಮಾ ನೋಡಬಹುದು. ಹಾಲಿವುಡ್ ಶೈಲಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾಡಿದ ಹಾರರ್, ಥ್ರಿಲ್ಲರ್ ಸಿನಿಮಾವಿದು. ಪ್ರಿಯಾಂಕ ಜತೆ ಮಗಳ ಪಾತ್ರದಲ್ಲಿ ಬೇಬಿ ಯುವಿನಾ ಅಭಿನಯಿಸಿದ್ದಾರೆ.

ಲೋಹಿತ್ ಎಚ್. ನಿರ್ದೇಶನದ ಈ ಸಿನಿಮಾ ಈಗಾಗಲೇ ಬೇರೆ ಭಾಷೆಯವರನ್ನೂ ಆಕರ್ಷಿಸಿದೆ. ಇದರಲ್ಲಿ ಮಮ್ಮಿ ಎಂದರೆ ಅಮ್ಮನಾ ಇಲ್ಲಾ ಭೂತವೋ ಎನ್ನುವುದನ್ನು ಥಿಯೇಟರ್ ನಲ್ಲೇ ಗುಂಡಿಗೆ ಗಟ್ಟಿ ಮಾಡಿಕೊಂಡು ನೋಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :