ಅಂತೂ ಇಂತೂ ತಮ್ಮ ಸಿನಿಮಾಗಳ ಮೂಲಕ ರಾಜಕೀಯ ವ್ಯವಸ್ಥೆಯ ವಿಡಂಬನೆ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರುಪ್ಪೀಸ್ ರೆಸಾರ್ಟ್`ನಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ ಜನಸೇವೆಯ ತಮ್ಮ ಪರಿಕಲ್ಪನೆಯನ್ನ ಮಾಧ್ಯಮಗಳ ಮುಂದಿಟ್ಟರು. ನಮಗೆ ನಾಯಕರೂ ಬೇಡ, ಸೇವಕರೂ ಬೇಡ. ಕರ್ನಾಟಕದ ಜನ ಅಶಕ್ತರಲ್ಲ, ನಮಗೆ ಕಾರ್ಮಿಕರು ಬೇಕು, ಕೆಲಸ ಮಾಡುವವರು ಬೇಕು. ಹೀಗಾಗಿಯೇ ಖಾಕಿ ಹಾಕಿ ಕುಳಿತಿದ್ದೇನೆ ಎಂದು ಉಪೇಂದ್ರ ಹೇಳಿದರು.ದುಡ್ಡಿನ ಬಲವಿಲ್ಲದೆ ರಾಜಕೀಯಕ್ಕೆ ಬರುವುದು ಸಾಧ್ಯವಿಲ್ಲವೆಂದು