ಶಿವರಾಜ್ಕುಮಾರ್ ಜತೆ ಹೊಸ ಸಿನಿಮಾ ಪ್ರಕಟಿಸಿದ ರಿಷಭ್ ಶೆಟ್ಟಿ..!

ಬೆಂಗಳೂರು| Ramya kosira| Last Updated: ಶುಕ್ರವಾರ, 20 ಆಗಸ್ಟ್ 2021 (10:01 IST)
ನಟನೆ ಹಾಗೂ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ರಿಷಭ್ ಶೆಟ್ಟಿ ಈಗ ಶಿವರಾಜ್ಕುಮಾರ್ ಅವರ 126ನೇ ಸಿನಿಮಾವನ್ನು ನಿರ್ದೇಶಿಸಲು ಸಜ್ಜಾಗುತ್ತಿದ್ದಾರೆ. ಅದಕ್ಕಾಗಿಯೇ ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಶಿವರಾಜ್ಕುಮಾರ್ ಕನ್ನಡ ಸಿನಿರಂಗದಲ್ಲೇ ಬ್ಯುಸಿಯಾಗಿರುವ ನಟ. ವರ್ಷದಲ್ಲಿ 3-4 ಸಿನಿಮಾಗಳು ಶಿವಣ್ಣನ ಕೈಯಲ್ಲಿರುತ್ತವೆ. ಇಂತಹ ನಟ ಈಗ 126ನೇ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಶಿವರಾಜ್ಕುಮಾರ್ ಅವರ 124ನೇ ಸಿನಿಮಾದ ಮುಹೂರ್ತ ನೆರವೇರಿದೆ. ಶಿವರಾಜ್ಕುಮಾರ್ ಅವರ 124ನೇ ಚಿತ್ರಕ್ಕೆ ಸುದೀಪ್ ಅವರು ಕ್ಲ್ಯಾಪ್ ಮಾಡಿದರೆ, ಗೀತಾ ಶಿವರಾಜ್ಕುಮಾರ್ ಅವರು ಕ್ಯಾಮೆರಾಗೆ ಚಾಲನೆ ನೀಡಿದ್ದರು. ಈಗ ಈ ಸಿನಿಮಾ ಪ್ರಕಟವಾದ ಬೆನ್ನಲ್ಲೇ ಈಗ 126ನೇ ಚಿತ್ರ ಸಹ ಅನೌನ್ಸ್ ಆಗಿದೆ. ಹೌದು, 126ನೇ ಸಿನಿಮಾವನ್ನು ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರ ಜೊತೆ ಮಾಡಲಿದ್ದಾರೆ ಶಿವರಾಜ್ಕುಮಾರ್. ಈಗಾಗಲೇ ಈ ಸಿನಿಮಾ ಕುರಿತಾಗಿ ಮಾತುಕತೆ ಸಹ ನಡೆದಿದೆ. ರಿಷಭ್ ಶೆಟ್ಟಿ ಅವರು ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಲ ರಿಷಭ್ ಹ್ಯಾಟ್ರಿಕ್ ಹೀರೋಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಹೌದು, ನಟನೆ ಹಾಗೂ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ರಿಷಭ್ ಶೆಟ್ಟಿ ಈಗ ಶಿವರಾಜ್ಕುಮಾರ್ ಅವರ 126ನೇ ಸಿನಿಮಾವನ್ನು ನಿರ್ದೇಶಿಸಲು ಸಜ್ಜಾಗುತ್ತಿದ್ದಾರೆ. ಅದಕ್ಕಾಗಿಯೇ ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.> ಇಂದು ಬೆಳ್ಳಂಬೆಳಗ್ಗೆ ಶಿವಣ್ಣ ಅವರನ್ನು ಭೇಟಿ ಮಾಡುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದ ಇಡುವ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಪೋಸ್ಟ್ ಮಾಡುವುದರ ಜೊತೆಗೆ ಶಿವರಾಜ್ಕುಮಾರ್ ಜತೆಗಿನ ಎರಡು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ ರಿಷಭ್ ಶೆಟ್ಟಿ.> ರಿಷಭ್ ಶೆಟ್ಟಿ ಅವರು ನಿರ್ಮಾಪಕ ಜಯಣ್ಣ ಅವರ ಜತೆ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ರಿಷಭ್ ಶೆಟ್ಟಿ ಅವರೇ ಕೊಟ್ಟಿರುವ ಸುಳಿವಿನ ಪ್ರಕಾರ ರಿಷಭ್ ಶೆಟ್ಟಿ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟು ಶಿವರಾಜ್ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳೋದು ಬಹುತೇಕ ಖಚಿತವಾಗಿದೆ. ರಿಷಭ್ ಶೆಟ್ಟಿ ಹಾಗೂ ಶಿವರಾಜ್ಕುಮಾರ್ ಅವರ ಸಿನಿಮಾಗೆ ಜಯಣ್ಣ ಬಂಡವಾಳ ಹಾಕಲಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ಬೇರೆ ಯಾವ ಕಲಾವಿದರು ಅಭಿನಯಿಸಲಿದ್ದಾರೆ. ಯಾವಾಗ ಸಿನಿಮಾ ಸೆಟ್ಟೇರಲಿದೆ ಹಾಗೂ ಕತೆ ಕುರಿತಾದ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಈ ಸಿನಿಮಾ ಆರಂಭಕ್ಕೂ ಮುಂಚೆ ಶಿವರಾಜ್ ಕುಮಾರ್ ಅವರು 123, 124 ಹಾಗೂ 125ನೇ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಬೇಕಿದೆ. ಇನ್ನು ರಿಷಭ್ ಶೆಟ್ಟಿ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಶಿವರಾಜ್ಕುಮಾರ್ ಅವರ 123ನೇ ಸಿನಿಮಾ ಬೈರಾಗಿ. ವಿಜಯ್ ಮಿಲ್ಟನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಒಂದು ಕಡೆ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ. ಈಗಾಗಲೇ ಈ ಸಿನಿಮಾದ ಫಸ್ಟ್ಲುಕ್ ಸಹ ರಿಲೀಸ್ ಆಗಿದೆ. ಆಗಸ್ಟ್ 27ರಂದು ಚಿತ್ರ ಮುಹೂರ್ತ ನಡೆಲಿದೆ. ಅಂದಿನಿಂದಲೇ ಶೂಟಿಂಗ್ ಸಹ ಆರಂಭವಾಗಲಿದೆ. ಈ ಚಿತ್ರ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದ ಮೇಲೆ ಚಿತ್ರೀಕರಿಸಲಾಗುತ್ತಿದೆಯಂತೆ. ಕಾಂತಾರ ಸಿನಿಮಾದ ಚಿತ್ರೀಕರಣ ಕುಂದಾಪುರದ ಸುತ್ತಮುತ್ತಲೇ ನಡೆಯಲಿದೆಯಂತೆ.
 ಇದರಲ್ಲಿ ಇನ್ನಷ್ಟು ಓದಿ :