ನಟ ವಿನೋದ್ ರಾಜ್‌ಗೆ ಇಂದು ಜನ್ಮದಿನ

bangalore| rajesh patil| Last Modified ಸೋಮವಾರ, 5 ಜುಲೈ 2021 (11:34 IST)
ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಡ್ಯಾನ್ಸ್ ಮೂಲಕ ಚಿರಪರಿಚಿತರಾಗಿರುವ ನಟ ವಿನೋದ್ ರಾಜ್‌ಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ ತಾಯಿಯೊಂದಿಗೆ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ವಿನೋದ್‍ರಾಜ್‍ ದ್ವಾರಕೀಶ್‍ ಮೂಲಕ ‘ಡಾನ್ಸ್ ರಾಜ ಡಾನ್ಸ್’ ಚಿತ್ರದಿಂದ ಕನ್ನಡಿಗರ ಮನೆಮಗ ಎನಿಸಿದ ನಟ ನಾನಾ ಕಾರಣಗಳಿಗಾಗಿ ಹಲವು ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರವಿದ್ದಾರೆ.
 
ಎಸ್ ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಮುಖವಾಡ’ ಚಿತ್ರದಲ್ಲಿ ಪವನ್‍ ತೇಜ, ಶಿಲ್ಪಾ ಮಂಜುನಾಥ್ ಜತೆಗೆ ವಿನೋದ್ ರಾಜ್ ಒಪ್ಪಿದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.


ಇದರಲ್ಲಿ ಇನ್ನಷ್ಟು ಓದಿ :