ಮುಖದಲ್ಲಿ ಸರಿಯಾಗಿ ಇನ್ನೂ ಮೀಸೆ ಮೂಡದ ಬಾಲಕನೋರ್ವ ಪ್ರೀತಿಗಾಗಿ ಲಾಂಗ್ ಹಿಡಿದು ಕೊಚ್ಚುವ ಚಿತ್ರ ಬಾಬಾ ಪ್ರೇಕ್ಷಕ ವರ್ಗದಿಂದ ಹೆಚ್ಚೇನು ಪ್ರಶಂಸೆಗೊಳಪಡಲಿಲ್ಲ. ನಿರ್ದೇಶಕ ತ್ರಿಶೂಲ್ ಒಂದು ಸಣ್ಣಮಟ್ಟದ ಕಥಾವಸ್ತುವನ್ನು ಆಯ್ಕೆ ಮಾಡಿದ್ದಾರೆ. ಜಾಳು ಜಾಳಾದ ನಿರೂಪಣೆ ಚಿತ್ರದ ಕಡೆಯವರೆಗೂ ಪ್ರೇಕ್ಷಕನಿಗೆ ಕಿರಿಕ್ ಉಂಟು ಮಾಡುತ್ತದೆ. ನಾಯಕ ಕಾರ್ತಿಕ್ ಮಾತಿನಲ್ಲಿ ಎಡವಿದ್ದರೂ ತನಗಿದ್ದ ಅವಕಾಶದಲ್ಲಿ ನಾಯಕನಂತೆ ಅಭಿನಯಿಸಲು ಪ್ರಯತ್ನಿಸಿದ್ದಾರೆ. ನೃತ್ಯ ಹಾಗೂ ಫೈಟ್ ದೃಶ್ಯಗಳಲ್ಲಿ ಕಾರ್ತೀಕ್ ಅಭಿನಯ ಚೆನ್ನಾಗಿ ಮೂಡಿಬಂದಿದೆ. ನಾಯಕಿ