1995ರಲ್ಲಿ ಬಿಡುಗಡೆಯಾದ ಕರಣ್ ಅರ್ಜುನ್ ಸಿನಿಮಾವನ್ನು ನೋಡಿದಾಗ ನನಗೆ ಈಗಲೂ ಕಣ್ಣೀರು ಬರುತ್ತೆ ಅಂತಾ ನಟ ಸಲ್ಮಾನ್ ಖಾನ್ ಹೇಳಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಹಾಗೂ ಶಾರುಖ್ ಖಾನ್ ಜೊತೆಯಾಗಿ ಅಭಿನಯಿಸಿದ್ದರು. ನಾನು ಮೂರು ತಿಂಗಳ ಹಿಂದೆಯಷ್ಟೇ ಕರಣ್ ಅರ್ಜುನ್ ಸಿನಿಮಾವನ್ನು ನೋಡಿದ್ದೆ. ಈ ಸಿನಿಮಾದಲ್ಲಿ ಅಣ್ಣ ತಮ್ಮಂದಿರು ಸಾಯುವ ದೃಶ್ಯವನ್ನಂತೂ ನೋಡಿದಾಗ ನನ್ನ ಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ನೀರು ಬಂತು ಅಂತಾ ಸಲ್ಮಾನ್ ಹೇಳಿದ್ದಾರೆ.ಸಿನಿಮಾದಲ್ಲಿ ಶಾರುಖ್ ಸಲ್ಮಾನ್ ಖಾನ್ ಸಹೋದರನಾಗಿ ಕಾಣಿಸಿಕೊಂಡಿದ್ದರು.