ಚೆನ್ನೈ: ಕ್ರೇಜಿಸ್ಟಾರ್ ಅಭಿನಯದ ನೀಲಕಂಠ, ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಯನದ ಇಂದ್ರ ಸೇರಿದಂತೆ ಒಂದಿಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸಿಗೆ ಕಚಗುಳಿ ಇಟ್ಟ ನಟಿ ನಮಿತಾ ತಮ್ಮ ಆತ್ಮೀಯ ಗೆಳೆಯ ವೀರಾಂದ್ರ ಚೌಧರಿ ಜತೆ ಹಸೆಮಣೆ ಏರಿದ್ದಾರೆ. ನಮಿತಾ ಅವರ ಆತ್ಮೀಯ ಗೆಳೆಯನಾಗಿರುವ ವೀರಾ ಜತೆ ಜೀವನವನ್ನು ಹಂಚಿಕೊಳುತ್ತಿರುವುದಕ್ಕೆ ನಮಿತಾ ಸಖತ್ ಖುಷಿಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಕುಟುಂಬ ವರ್ಗದವರ ನಡುವೆ ತಿರುಪತಿಯ ಇಸ್ಕಾನ್ ನಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ