ಮಾಂಸಾಹಾರಿ ಸಸ್ಯಗಳು, ಮರಿ ಹಾಕುವ ಹಾವುಗಳು ಹೀಗೆ ಹತ್ತು ಹಲವು ರೀತಿಯ ಪ್ರಕೃತಿ ವಿಸ್ಮಯಗಳನ್ನು ನೀವು ಓದಿರುತ್ತೀರಿ ಅಥವಾ ತಿಳಿದುಕೊಂಡಿರುತ್ತೀರಿ. ಅದೇ ರೀತಿ ಮೊಟ್ಟೆ ಇಡುವ ಪ್ರಾಣಿಗಳು (ಸಸ್ತನಿಗಳು) ಸಹ ಇವೆ. ಹಾಲನ್ನು ಉಣಿಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಕರೆಯುತ್ತಾರೆ. ಹೀಗೆ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಹಾಲನ್ನು ಉಣಿಸುವ ಪ್ರಾಣಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ. ಪ್ರಪಂಚದಲ್ಲಿ ಈವರೆಗೆ ಐದು ಪ್ರಕಾರದ ಮೊಟ್ಟೆ ಇಡುವ ಸಸ್ತನಿಗಳು ಪತ್ತೆಯಾಗಿವೆ. ಅವುಗಳಲ್ಲಿ ಪ್ಲಾಟಿಪಸ್ ಒಂದಾದರೆ, ಎಕಿಡ್ನಾ