ND ಇಲ್ಲಿಲ್ಲ ಎರಡು ಜೀವಗಳು. ಆದರೂ ಇಲ್ಲಿದೆ ಒಂದು ಅಂತ್ಯಗೊಳ್ಳದ ಕಥೆ. ಅಲ್ಲಲ್ಲ ಸಂಬಂಧ... ಎರಡು ಮನಸುಗಳ ನಡುವಿನ ತಾಕಲಾಟದ ಪಿಸು ಮಾತಿನ ಸಂಭಾಷಣೆ. ಇಡೀ ಜೀವನವನ್ನು ಹುಚ್ಚು ಕಲ್ಪನೆಗಳ ಲೋಕದಲ್ಲಿ ಕಳೆದುಕೊಳ್ಳುವ ಹುಚ್ಚು ತವಕವೂ ಇಲ್ಲಿ ಇಲ್ಲ. ಇತ್ತ ವಾಸ್ತವಿಕ ಜೀವನದಲ್ಲಿ ಬದುಕು ಕಟ್ಟುವ ಧಾವಂತವೂ ಇಲ್ಲ. ಕಲ್ಪನೆ ಮತ್ತು ವಾಸ್ತವಿಕ ಜಗತ್ತಿನ ನಡುವೆ ಉಳಿದು ಅಸ್ತಿತ್ವ ಕಟ್ಟಿಕೊಳ್ಳುವ ತವಕ ಈ ವಿಚಿತ್ರ ಸಂಬಂಧದಲ್ಲಿ ಆಗಾಗ ತಲೆ ಎತ್ತುತ್ತಿರುತ್ತದೆ