ಶರೀಫ್ ತನ್ನ ಮೆಡಿಕಲ್ ಶಾಪ್ನತ್ತ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ. ಮುಂದಿನ ಭಾನುವಾರ ತನ್ನ ಮದುವೆ ಇರುವ ಕಾರಣ ಅವನಿಗೆ ಸ್ವಲ್ಪವೂ ಪುರುಸೊತ್ತಿರಲಿಲ್ಲ. ಪತ್ನಿಯಾಗಿ ಬರುವ ಆ ಮದುಮಗಳ ಉರುಟುರುಟಾದ ಮುಖವನ್ನು ನೆನಪಿಸುತ್ತಾ ಸಂತಸದಲ್ಲಿ ತೇಲುತ್ತಲೇ ಬೈಕ್ ಚಲಾಯಿಸುತ್ತಿದ್ದ. ಶರೀಫ್ನ ಬೈಕ್ ನೇತ್ರಾವತಿ ಸೇತುವೆಯಲ್ಲಿ ಚಲಿಸುತ್ತಿತ್ತು. ಗಂಟೆ ಸುಮಾರು ಬೆಳಿಗ್ಗೆ ಎಂಟುವರೆಯಾಗಿರಬಹುದು. ಎದುರಲ್ಲಿ ಹೋಗುತ್ತಿದ್ದ ಬಸ್ಸನ್ನು ಓವರ್ ಟೇಕ್ ಮಾಡುತ್ತಾ ಮುಂದೆ ಸಾಗುತ್ತಿದ್ದಾಗ, ಏನಾಯಿತು ಎಂಬುದು ಆ ಪಡೆದವನಿಗೇ ಗೊತ್ತು. ಕೇರಳದ