ಫ್ರೆಂಚ್ ಸೈನಿಕರು ಜರ್ಮನಿಯಲ್ಲಿ ಬಿಡಾರ ಹೂಡಿದ್ದರು. ಕುದುರೆಗಳಿಗೆ ಅಗತ್ಯವಾದ ಹುಲ್ಲನ್ನು ಒದಗಿಸುವ ಕೆಲಸವನ್ನು ಒಬ್ಬ ಸೈನ್ಯಾಧಿಕಾರಿಗೆ ವಹಿಸಲಾಗಿತ್ತು. ಆ ಅಧಿಕಾರಿ ತನ್ನ ಸೈನಿಕರೊಂದಿಗೆ ಹೊರಟ. ನಿಯಮಿತ ಸ್ಥಳಕ್ಕೆ ಬಂದು ಸೇರಿದ. ಅಲ್ಲಿ ಮರಗಳು ಮಾತ್ರ ಇದ್ದನು. ಆ ಪ್ರದೇಶ ಒಂದು ಸಣ್ಣ ಕಂದರ. ಸುತ್ತಲೂ ಬೆಟ್ಟಗುಡ್ಡಗಳಿದ್ದುವು. ಸ್ವಲ್ಪ ದೂರದಲ್ಲಿ ಒಂದು ಗುಡಿಸಲು ಕಾಣಿಸುತ್ತಿತ್ತು.ಆ ಅಧಿಕಾರಿ ಆ ಗುಡಿಸಲಿನ ಬಾಗಿಲನ್ನು ತಟ್ಟುವಂತೆ ಹೇಳಿದ. ಬಾಗಿಲನ್ನು ತಟ್ಟಿದಾಗ ಬಿಳಿ ಗಡ್ಡಧಾರಿಯಾದ ಒಬ್ಬ ಮುದುಕ