PTI ಸುರತ್ಕಲ್ ಹೊತ್ತಿ ಉರಿಯುತ್ತಿತ್ತು. ಜನರ ಮನಸ್ಸು ಅಶಾಂತಿಗೀಡಾಗಿ ತತ್ತರಿಸುತ್ತಿತ್ತು. ವ್ಯಾಪಕ ಗಾಳಿಸುದ್ದಿ ಹಬ್ಬುತ್ತಿತ್ತು. ಕೆಲ ಪತ್ರಿಕೆಗಳಲ್ಲಿ ಪುಂಖಾನುಪುಂಕಿಯ ವರದಿಗಳು ಬರುತ್ತಿತ್ತು.ಅದು ಮತೀಯ ಗಲಭೆ,ಗುಂಪು ಘರ್ಷಣೆ, ಕೋಮುಗಲಭೆ ಮುಂತಾದ ಹೆಸರಿನಿಂದ ಗುರುತಿಸಲ್ಪಟ್ಟು ಜಿಲ್ಲೆಯನ್ನೇ ನಡುಗಿಸುತ್ತಿದ್ದ ದಿನವೊಂದರ ರಾತ್ರಿ ಬಾಲ್ಯ ಸ್ನೇಹಿತರಾಗಿದ್ದ ಪ್ರಕಾಶ್ ಮತ್ತು ರಮೇಶ್ ಬಾರೊಂದರ ನಡುವೆ ಇದ್ದ ಮೇಜಿನ ಮುಂದೆ ಎದುರುಬದುರಾಗಿ ಕೂತಿದ್ದಾರೆ.ಇಬ್ಬರ ಕೈಯಲ್ಲೂ ಸಿಗರೇಟಿನ ತುಂಡಿದೆ. ಎರಡು ಕಪ್ನಲ್ಲಿ ಅರ್ಧರ್ಧ ಕಾರುವ ವಿಸ್ಕಿಯನ್ನು ಕುಡಿಯಲು ರಮೇಶ್ ಮತ್ತು