PTI ಆಗ ತಾನೆ ಶಿಕ್ಷಣ ಪದವಿ ಮುಗಿಸಿದ ನಾನು ಕೆಲಸಕ್ಕಾಗಿ ನಾಲ್ಕೈದು ಕಡೆ ಕಾಲೆಳೆದು ಬೇಸರಗೊಂಡಿದ್ದೆ. ಹಾಗಾಗಿ ಕೆಲ ದಿನಗಳವರೆಗೆ ಎತ್ತಲೂ ಹೋಗದೆ ಮನೆಯಲ್ಲೇ ಉಳಿದಾಗ, ಉಮ್ಮ ದುಃಖದಿಂದ ಅದೇನೋ ಹೇಳತೊಡಗಿದರು. ಈ ಊರಲ್ಲಿ ಯಾರೂ ಕಲಿಯದಷ್ಟು ನೀ ಕಲಿತೆ. ಆದರೆ ಏನನ್ನು ಸಾಧಿಸಿದೆ? ದಿನಕ್ಕೆರಡು ಪುಸ್ತಕವನ್ನಿಡಿದು ನಡೆದಾಡಿದಾಗ ನಾನೆಷ್ಟು ಕುಶಿಗೊಂಡಿದ್ದೆ ಗೊತ್ತಾ? ಅದೆಷ್ಟು ಕನಸು ಕಂಡಿದ್ದೆ. ಆದರೆ ಈಗ ....ಹ್ಞೂಂ, ಅದಿರಲಿ ನಿನ್ನ ಜತೆ ಹರಕು ಮುರುಕು ಚಡ್ಡಿ