ಶೇಂದಿಯ ಅಂಗಡಿಗೆ ಮಾಧವರಾವ್ ಪ್ರವೇಶವಾಯ್ತು!ಅಣ್ಣಾ ನಮಸ್ಕಾರ! ದೇವರು ನಮಸ್ಕಾರ! ಎನ್ನುತ್ತಾ ಅಲ್ಲಿ ಸೇರಿದ್ದ ಎಲ್ಲ ಕುಡುಕರು ಭಾರಿ ಮರ್ಯಾದೆ ನೀಡಿದರು. ಮಾಧವರಾವ್ ಸಿಲ್ಕ್ ಜುಬ್ಬಾ ಧರಿಸಿ ಜೇಬಿನಲ್ಲಿ ನೋಟಿನ ಕಂತೆಗಳನ್ನು ಇಟ್ಟುಕೊಂಡು ಬರುವುದರಿಂದಲೇ ಆತನಿಗೆ ಅಂತಹ ಗೌರವ.ಮಾಧವರಾವ್ಗೆ ಹಿರಿಯರು ಸಂಪಾದಿಸಿಟ್ಟ ಆಸ್ತಿ ಕೊಳೆಯುತ್ತಿದೆ. ಶ್ರೀಮಂತಿಕೆ ಕುಣಿಯುತ್ತಿದೆ. ಅವರಿಗೆ ಬೇಗ ಶೇಂದಿ ಕೊಡು! ಎಂದು ಅಂಗಡಿಯವನು ತನ್ನ ನೌಕರನನ್ನು ಗದರಿದನು.ಧಣಿ ಇನ್ನೂ ಎರಡು ತಾಳೆ ಗಿಡಗಳ ಶೇಂದಿ ಬರಲಿಲ್ಲ ಕ್ಷಮಿಸಿ ಧಣಿ