ಹಂಝ ಮಲಾರ್ಅದೊಂದು ಸೌಹಾರ್ದ ವೇದಿಕೆ ಎನ್ನಬಹುದು. ಹಾಗಿದೆ ಆ ಕೇರಿಯ ಮೂರು ಮನೆಗಳು. ಅವರೆಲ್ಲಾ ಅಲ್ಲಿ ಹುಟ್ಟಿ ಬೆಳೆದವರಲ್ಲ. ಒಂದೆರಡು ವರ್ಷದ ಹಿಂದೆ ಬೇರೆ ಬೇರೆ ಕಡೆಗಳಿಂದ ಬಂದು ನೆಲೆಸಿದವರು. ಆ ಕೇರಿಯ ರಸ್ತೆ ದಾಟುವಾಗ ಮೊದಲು ಸಿಗುವ ಮನೆ ಸುಲೈಮಾನ್ ಸಾಹೇಬರದ್ದು. ನಂತರ ಅಕ್ಷಯಕುಮಾರ್ರವರ ಮನೆ ಸಿಗುತ್ತದೆ. ಅವುಗಳಿಗೆ ಎದುರಾಗಿ ಫೆಡ್ರಿಕ್ ಡಿಸೋಜಾರದ್ದಿದೆ. ಸುಲೈಮಾನ್ ಸಾಹೇಬರು ಜಿನಸಿ ಅಂಗಡಿಯ ಬಾಗಿಲು ಮುಚ್ಚಿ ಸೋಫಾಕ್ಕೆ ಒರಗುವಷ್ಟರಲ್ಲಿ ಫೋನ್ ಗುಣುಗುಟ್ಟಿತು. ರಿಸೀವರ್