ಹಂಝ ಮಲಾರ್ ಹಲೋ ಗುಡ್ ಮಾರ್ನಿಂಗ್, ಸರ್ವಾಣಿ ಡೈಲಿ ಹಾಗಂತ ದಿನಾ ಬೆಳಿಗ್ಗೆ ಎಂಟರಿಂದ ಸಂಜೆ ಆರರವರೆಗೆ ಐಶ್ವರ್ಯ ರಿಸೀವರ್ ಕೈಗೆತ್ತಿಕೊಂಡೊಡನೆ ಹೇಳುತ್ತಾಳೆ. ದಿನಕ್ಕೆ ಕಡಿಮೆ ಎಂದರೂ ಐನೂರಕ್ಕೂ ಅಧಿಕ ಪೋನ್ ಕರೆಗಳನ್ನು ಸ್ವೀಕರಿಸುವ ಆಕೆ, ಎಡಿಟಿಂಗ್, ಪ್ರಿಂಟಿಂಗ್, ಸರ್ಕ್ಯುಲೇಶನ್, ಎಡ್ವರ್ಟೈಸ್ಮೆಂಟ್ ಹೀಗೆ ವಿವಿಧ ಸೆಕ್ಷನ್ಗಳಿಗೆ ಕನೆಕ್ಷನ್ ಕೊಡುತ್ತಾಳೆ. ಒಮ್ಮೊಮ್ಮೆ ಮಧ್ಯಾಹ್ನ 12 ಗಂಟೆ ದಾಟಿದ್ದರೂ ಕೂಡ ಗುಡ್ ಮಾರ್ನಿಂಗ್ ಅಂತಲೇ ಹೇಳುತ್ತಾಳೆ ಎಂದನ್ನುತ್ತಾ ಕೆಲವರು ಚೇಷ್ಠೆಯಾಡುತ್ತಾರೆ. ಓ ಸ್ವಾರಿ