Vishnu ರಾತ್ರಿ 10 ಗಂಟೆಯಾಗಿತ್ತು. ತಾಳಿಪಿಂಡ್ ಜುಮ್ಮಾ ಮಸೀದ್ನ ಖತೀಬರಾದ ಅಲ್ಹಾಜ್ ಎಂ.ಬಿ.ಬೀರಾನ್ ಉಸ್ತಾದ್, ಯಾಸೀನ್ ಓದಿ ಮುಸಾಫ್ ಮಡಚಿಟ್ಟು ಸಲಾತನ್ನು ಬಾಯಲ್ಲಿ ಗುಣಗುಟ್ಟುತ್ತಿರುವಾಗ ಅವರಿಗೆ ಯಾರೋ ಬಾಗಿಲು ಬಡಿದ ಶಬ್ದವಾಯಿತು. ಯಾರು? ಎಂದು ಕೇಳುತ್ತಾ ಬಾಗಿಲು ತೆರೆದ ಉಸ್ತಾದ್ರಿಗೆ ಹದಿನಾಲ್ಕು ಹರೆಯದ ಹುಡುಗನೊಬ್ಬ ಚೆಂಬಲ್ಲಿ ನೀರು ಮತ್ತು ಕಪ್ಪು ನೂಲನ್ನು ಹಿಡಿದು ಎದುರಲ್ಲಿ ನಿಂತುದನ್ನು ಕಂಡು ಆಶ್ಚರ್ಯವಾಗಿತ್ತು. ಏನು ಮೋನೇ? ಯಾಕೆ ಬಂದೆ? ಎಂದು ಉಸ್ತಾದರು ಕೇಳಿದರು. ಉಸ್ತಾದ್...