ಯುಗಾದಿಯಂದು ಸ್ವಾಮಿ ವೆಂಕಟೇಶ್ವರ ಮಂದಿರದಲ್ಲಿ ಜನಜಾತ್ರೆ ತುಂಬಿತುಳುಕುತ್ತಿದ್ದರೂ, ಆದಷ್ಟು ಶೀಘ್ರದಲ್ಲಿ ದರ್ಶನ ಮುಗಿಸಿಕೊಂಡು, ಪೂಜಾರಿ ಕೊಟ್ಟ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಹೊರಬಿದ್ದ ರಾಜೇಶ್ನನ್ನು ಭಿಕ್ಷಕರು ಮುತ್ತಿಕೊಂಡರು.ಎಲ್ಲರಿಂದ ತಪ್ಪಿಸಿಕೊಂಡು ಹೊರಬಂದ ರಾಜೇಶ್ನಿಗೆ ರೀ..ಏನ್ರಿ ಅಲ್ಲಿ ನೋಡಿ ಭಿಕ್ಷಾ ಪಾತ್ರೆಯನ್ನು ಎದುರಿಟ್ಟುಕೊಂಡು ಭಿಕ್ಷೆ ಕೇಳದೆ ಭಗವಂತನನ್ನು ಪ್ರಾರ್ಥಿಸುತ್ತಾ ಕಣ್ಣುಮುಚ್ಚಿ ಕುಳಿತ ಭಿಕ್ಷುಕನನ್ನು ನೋಡ್ರಿ ಎಂದು ಗಂಡನಿಗೆ ಹೇಳಿದಳು ಮಾಲತಿ. ಆ ಭಿಕ್ಷುಕನನ್ನು ನೋಡಿದ ರಾಜೇಶ್ನಿಗೆ ಯಾಕೊ ಭಿಕ್ಕೆ ಹಾಕಬೇಕು ಎಂದೆನಿಸಿ ಜೇಬಿನಿಂದ ರೂಪಾಯಿ