ಅಣ್ಣಾ ನನ್ನ ಜೀವ ಉಳಿಸಿ: ಬಸ್ಸಿನಡಿ ಸಿಕ್ಕಿಬಿದ್ದ ವ್ಯಕ್ತಿಯ ಆರ್ತನಾದ

ವೆಬ್‌ದುನಿಯಾ|
PR
PR
ಧಾರವಾಡ: ಅಣ್ಣಾ ನನ್ನ ಜೀವ ಉಳಿಸಿ, ಎದ್ದೇಳಲು ಆಗುತ್ತಿಲ್ಲ ಎಂಬ ವ್ಯಕ್ತಿಯ ಕೇಳಿಬಂದಿತು. ಧಾರವಾಡದಿಂದ ಐದು ಕಿಲೋಮೀಟರ್ ದೂರದಲ್ಲಿ ಬಸ್ಸೊಂದು ಕಂದಕವೊಂದಕ್ಕೆ ಬಿದ್ದಿತು. ಕಂದಕಕ್ಕೆ ಉರುಳಿಬಿದ್ದರೂ ಎಲ್ಲರೂ ಸಾವಿನಿಂದ ಬಚಾವಾಗಿದ್ದರು. ಬದುಕಿದೆಯೆ ಬಡ ಜೀವವೇ ಎಂದು ಬಸ್ಸಿನ ಪ್ರಯಾಣಿಕರು ಉರುಳಿಬಿದ್ದ ಬಸ್ಸಿನಿಂದ ಒಬ್ಬೊಬ್ಬರಾಗಿ ಹೊರಬಂದರು. ಆದರೆ ಬಸ್ಸಿನಡಿಯಲ್ಲಿ ಸಿಕ್ಕಿಬಿದ್ದಿದ್ದ ವ್ಯಕ್ತಿಯೊಬ್ಬ ಅಣ್ಣಾ, ನನ್ನ ಜೀವ ಉಳಿಸಿ ಎಂಬ ಆರ್ತನಾದ ಕೇಳಿಬಂದಿತು. ಬಸ್ಸಿನಡಿ ಸಿಲುಕಿದ ವ್ಯಕ್ತಿಯನ್ನು ಹೇಗೆ ರಕ್ಷಿಸುವುದೇ ಎನ್ನುವುದೇ ಸಮಸ್ಯೆಯಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :