ವೆಬ್ದುನಿಯಾ|
Last Modified ಶುಕ್ರವಾರ, 21 ಫೆಬ್ರವರಿ 2014 (11:15 IST)
PR
PR
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ವಿಧಾನಪರಿಷತ್ತಿನಲ್ಲಿ ಅನ್ನಭಾಗ್ಯ ಯೋಜನೆಯ ದುರ್ಬಳಕೆ ಕುರಿತು ಪ್ರಸ್ತಾಪ ಮಾಡಿದರು. ಹಗರಣದ ವರದಿಯನ್ನು ನಾನು ನೋಡಿದ್ದೇನೆ. ಆ ರೀತಿ ದುರ್ಬಳಕೆ ಆಗದಂತೆ ನೋಡಿಕೊಳ್ಳಿ ಎಂದು ಸದಾನಂದ ಗೌಡ ಹೇಳಿದರು. ಆಗ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಆ ರೀತಿಯ ದುರ್ಬಳಕೆ ಆಗದಂತೆ ಕ್ರಮ ಕೈಗೊಳ್ತೀವಿ ಎಂದು ಭರವಸೆ ನೀಡಿದರು.ಟಿವಿ ವಾಹಿನಿಯೊಂದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಾರೆಂಬ ಸುದ್ದಿಪ್ರಕಟವಾದ ಬಳಿಕ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು.