ಈ ಶೈಕ್ಷಣಿಕ ವರ್ಷದಲ್ಲಿ ಸಿಇಟಿ ಕಾಯ್ದೆ ಜಾರಿ ಮಾಡೋಲ್ಲ : ಸಿಎಂ ಭರವಸೆ

ವೆಬ್‌ದುನಿಯಾ| Last Modified ಶುಕ್ರವಾರ, 20 ಡಿಸೆಂಬರ್ 2013 (18:30 IST)
PR
PR
ಬೆಂಗಳೂರು: 2006ರ ಸಿಇಟಿ ಕಾಯ್ದೆ ಜಾರಿಯ ವಿರುದ್ಧ ಸಾರ್ವಜನಿಕರು, ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ 2014-15ರ ಶೈಕ್ಷಣಿಕ ವರ್ಷದಲ್ಲಿ ಈ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ತಿಳಿಸಿದೆ. ಈಗ ಜಾರಿಯಲ್ಲಿರುವ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಇದರಿಂದ ಸದ್ಯಕ್ಕೆ 2006ರ ಸಿಇಟಿ ಕಾಯ್ದೆಯ ಪೆಟ್ಟಿನಿಂದ ವಿದ್ಯಾರ್ಥಿಗಳು ತಪ್ಪಿಸಿಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 2006ರ ಸಿಇಟಿ ಕಾಯ್ದೆ ನಾವು ರೂಪಿಸಿದ್ದಲ್ಲ. ಬಿಜೆಪಿ-ಜೆಡಿಎಸ್ ಸರ್ಕಾರವಿದ್ದಾಗ ಅದನ್ನು ರೂಪಿಸಿತ್ತು. ಹೆಚ್ಚುವರಿ ಚಾರ್ಜ್ ವಸೂಲಿ ಮಾಡಬಾರ್ದು, ಯಾವ ವಿದ್ಯಾರ್ಥಿಗಳಿಗೂ ಅನ್ಯಾಯವಾಗಬಾರದು ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟು ಈ ಕಾಯ್ದೆಯನ್ನು ತರಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :