ಎಸ್. ಆರ್. ಹಿರೇಮಠ್ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ

ವೆಬ್‌ದುನಿಯಾ| Last Modified ಶನಿವಾರ, 23 ನವೆಂಬರ್ 2013 (12:15 IST)
PR
PR
ಧಾರವಾಡ: ಧಾರವಾಡದ ಸಾಧನಕೇರಿಯಲ್ಲಿರುವ ಸಮಾಜ ಪರಿವರ್ತನಾ ಸಂಘದ ಎಸ್.ಆರ್. ಹಿರೇಮಠ್ ಕಚೇರಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ನಡೆದಿದೆ. ಬೆಳಿಗ್ಗೆ 9.45ರ ವೇಳೆಗೆ ದುಷ್ಕರ್ಮಿಗಳು ಕಚೇರಿ ಮೇಲೆ ದಾಳಿ ನಡೆಸಿದರು. ಸುಮಾರು ಏಳೆಂಟು ಜನ ಯುವಕರು ನನ್ನ ಕಚೇರಿಗೆ ನುಗ್ಗಿ ನನ್ನನ್ನು ಸಾಕಷ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹಿರೇಮಠ್ ಹೇಳಿದ್ದಾರೆ. ಸಬರ್ಮನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿರೇಮಠ್ ಹೋರಾಟ ಮಾಡಿಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :