Widgets Magazine

ಕಕನಕಪುರದ ಶೇ. 66.67 ಮತದಾನ 73.29ಕ್ಕೆ ಜಂಪ್ ಆಗಿದ್ದು ಹೇಗೆ?

ವೆಬ್‌ದುನಿಯಾ| Last Modified ಶುಕ್ರವಾರ, 23 ಆಗಸ್ಟ್ 2013 (19:28 IST)
PR
PR
ಕನಕಪುರ: ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮತಎಣಿಕೆಯಲ್ಲಿ ಯಾವುದೇ ಗೊಂದಲವಿಲ್ಲ, ಮತದಾರರ ಸಂಖ್ಯೆ ಸರಿಯಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದ ರಾಮನಗರ ಡಿಸಿ ಶ್ರೀರಾಮರೆಡ್ಡಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಮೊದಲಿಗೆ 66.67 ಮತದಾನವಾಗಿದೆ ಎಂದು ಹೇಳಿಕೆ ನೀಡಿದ ನಂತರ ಹೇಳಿಕೆ ಬದಲಾಯಿಸಿ ಶೇ. 73. 29ರಷ್ಟು ಮತದಾನವಾಗಿದೆ ಎಂದು ಹೇಳಿಕೆ ನೀಡಲಾಯಿತು. ಈ ಕುರಿತು ಚುನಾವಣೆ ಆಯೋಗಕ್ಕೆ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ದೂರು ನೀಡಿದ ಹಿನ್ನೆಲೆಯಲ್ಲಿ ಶ್ರೀರಾಮರೆಡ್ಡಿ ಮೇಲಿನ ಸ್ಪಷ್ಟನೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :