ಸೀತಾಮಾತಾ ರಾಮನನ್ನು ಜಪಿಸಿದಂತೆ ಕಾಂಗ್ರೆಸ್ ಪಕ್ಷವನ್ನು ಜಪಿಸುತ್ತೇವೆ: ಪೂಜಾರಿಗೆ ವಿಶ್ವನಾಥ್ ಬೆಂಬಲ

ಮೈಸೂರು| Vinod| Last Modified ಶುಕ್ರವಾರ, 30 ಡಿಸೆಂಬರ್ 2016 (12:16 IST)
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹಾಗೂ ನಾನು ಅಶೋಕವನದ ಸೀತೆಯಂತೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಜನಾರ್ದನ ಪೂಜಾರಿ ಅಶೋಕವನದ ಸೀತೆಯಂತೆ. ರಾಮನನ್ನು ಬಿಟ್ಟು ಸೀತಾಮಾತೆ ಯಾರನ್ನು ನೆನೆಯುತ್ತಿರಲಿಲ್ಲ. ಹಾಗೆಯೇ ನಾವು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷವನ್ನು ನೆನೆಯುವುದಿಲ್ಲ. ಇದನ್ನು ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.


ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಹಿರಿಯ ನಾಯಕರ ಮಾತಿಗೆ ಮನ್ನಣೆ ಸಿಗಬೇಕು. ಕಾಂಗ್ರೆಸ್ ಪಕ್ಷದಲ್ಲಿ ನಮಗೂ ಒಳ್ಳೆಯ ಕಾಲ ಬರಲಿದೆ. ಒಳ್ಳೆಯ ಕಾಲಕ್ಕಾಗಿ ಬುಡಬುಡಿಕೆಯವರಂತೆ ಕಾಯುತ್ತಿದ್ದೇವೆ ಎಂದರು.

ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲು ಖಚಿತ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಬಾರದಾಗಿತ್ತು. ಆದರೆ, ಈಗಲೂ ಪೂಜಾರಿ ಅವರ ನಿಷ್ಠೆಯನ್ನು ಗೌರವಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :