Widgets Magazine

ಕುಡಿಯುವ ನೀರು ಒದಗಿಸಲು ಎತ್ತಿನ ಹೊಳೆ ಯೋಜನೆ: ಸಿದ್ದರಾಮಯ್ಯ ಸ್ಪಷ್ಟನೆ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಚಿಕ್ಕಬಳ್ಳಾಪುರ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಗಳು ಈ ಎಲ್ಲಾ ಜಿಲ್ಲೆಗಳ ಜತೆ ಹಾಸನ, ತುಮಕೂರು, ಚಿಕ್ಕಮಗಳೂರು ಈ ಜಿಲ್ಲೆಗಳಿಗೂ ಕೂಡ ನೀರನ್ನು ಕೊಡತಕ್ಕಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಎತ್ತಿನಹೊಳೆಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಹೇಳಿದರು. ಕೋಲಾರ, ಈ ಭಾಗದಲ್ಲಿ ಯಾವ ನದಿಮೂಲಗಳೂ ಕೂಡ ಇಲ್ಲ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಸಮಸ್ಯೆಯಾಗಿದೆ. ಮೊದಲನೇ ಆದ್ಯತೆ ಮೇಲೆ ಜನರಿಗೆ ಕುಡಿಯುವ ನೀರು ಕೊಡುವುದು ಸರ್ಕಾರದ ಜವಾಬ್ದಾರಿ. ಹಿಂದಿನ ಸರ್ಕಾರ ಈ ಯೋಜನೆ ರೂಪಿಸಿದೆ. ಆದರೆ ವಿಸ್ತೃತ ಯೋಜನೆ ವರದಿ ತಯಾರಿಸಿಲ್ಲ.


ಇದರಲ್ಲಿ ಇನ್ನಷ್ಟು ಓದಿ :