ಕೇಜ್ರಿವಾಲ್ ದಾಖಲೆ ಬಿಡುಗಡೆ ಮಾಡ್ಲಿ: ಕುಮಾರಸ್ವಾಮಿ ಸವಾಲ್

ನವದೆಹಲಿ| ವೆಬ್‌ದುನಿಯಾ| Last Modified ಶುಕ್ರವಾರ, 31 ಜನವರಿ 2014 (15:29 IST)
PR
PR
ಲೋಕಸಭೆ ಚುನಾವಣೆಯಲ್ಲಿ ಭ್ರಷ್ಟ ಸಂಸದರನ್ನು ಸೋಲಿಸಿ ಎಂದು ಕೆಲವು ಭ್ರಷ್ಟ ಮುಖಂಡರ ಹೆಸರನ್ನು ಕೇಜ್ರಿವಾಲ್ ಪ್ರಸ್ತಾಪಿಸಿರುವ ಬಗ್ಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆ ಕೇಜ್ರಿವಾಲ್ ಅವರಿಗೆ ಶೋಭೆ ತರುವುದಿಲ್ಲ. ನನ್ನ ಹೆಸರನ್ನು ಲಘುವಾಗಿ ಬಳಸಿರುವುದು ಸರಿಯಲ್ಲ. ನನ್ನ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆರೋಪಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಕೇಜ್ರಿವಾಲ್‌ಗೆ ಸವಾಲು ಹಾಕಿದ್ದಾರೆ. ಭ್ರಷ್ಟ ಮುಖಂಡರ ಪಟ್ಟಿಯಲ್ಲಿ ರಾಜ್ಯದ ನಾಲ್ವರ ಹೆಸರನ್ನು ಕೇಜ್ರಿವಾಲ್ ಪ್ರಸ್ತಾಪಿಸಿದ್ದು, ಅವರಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ, ವೀರಪ್ಪ ಮೊಯ್ಲಿ, ಅನಂತಕುಮಾರ್ ಸೇರಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :