ಜ್ಯೋತಿಷಿಗಳನ್ನು ಗ್ರಾಹಕ ಕಾಯ್ದೆಯ ಅಡಿ ಸೇರಿಸಿ : ನಿಡುಮಾಮಿಡಿ ಶ್ರೀ

ಬೆಂಗಳೂರು , ಮಂಗಳವಾರ, 12 ನವೆಂಬರ್ 2013 (13:33 IST)

PR
PR
ಕಳ್ಳ ಜ್ಯೋತಿಷಿಗಳಿಂದ ಅಮಾಯಕ ಜನರು ಮೋಸ ಹೋಗುತ್ತಿದ್ದಾರೆ. ಇದರಿಂದ ನಿಜವಾದ ಜ್ಯೋತಿಷಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಎಲ್ಲಾ ಜ್ಯೋತಿಷಿಗಳನ್ನು ಗ್ರಾಹಕರ ಕಾಯ್ದೆಯ ಅಡಿಯಲ್ಲಿ ತರಬೇಕು. ಹೀಗಾದಾಗ ಮಾತ್ರ ಜ್ಯೋತಿಷಿಗಳಿಂದ ಆಗುತ್ತಿರುವ ಶೋಷಣೆಯನ್ನು ನಿಲ್ಲಿಸಲು ಸಾಧ್ಯ ಎಂದು ನಿಡುಮಾಮಿಡಿ ಶ್ರೀಗಳು ಹೇಳಿದ್ದಾರೆ.

ಮೂಢನಂಬಿಕೆ ಕಾಯಿದೆಯ ಬಗ್ಗೆ ಮಾತನಾಡಿದ ನಿಡುಮಾಮಿಡಿ ಶ್ರೀಗಳು, ಜನರನ್ನು ಶೋಷಣೆ ಮಾಡುವಂತಹ ಅಂಧ ಆಚರಣೆಗಳನ್ನು ನಿಶೇಧಿಸುವ ಅಗತ್ಯವಿದೆ. ರಂಭಾಪುರಿ ಶ್ರೀಗಳಿಂದ ಕಾಯಿದೆಗೆ ವಿರೋಧವಿದೆ. ಅವರು ಕಾಯಿದೆಯನ್ನು ಉಲ್ಲಂಘಿಸಿ, ಪಾದ ಪೂಜೆ ನಡೆಸುತ್ತಿದ್ದಾರೆ ಎಂದು ನಿಡುಮಾಮಿಡಿ ಶ್ರೀಗಳು ಕಿಡಿ ಕಾರಿದ್ರು.

ಅಷ್ಟೆ ಅಲ್ಲ, ಮಾಧ್ಯಮಗಳ ವಿರುದ್ಧವೂ ಹರಿ ಹಾಯ್ದ ಶ್ರೀಗಳು "ಮಾಧ್ಯಮಗಳಿಂದ ಜ್ಯೋತಿಷಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ಮಾಧ್ಯಮಗಳೇ ಜ್ಯೋತಿಷಿಗಳನ್ನು ಬೆಳೆಸುತ್ತಿದೆ. ಇದನ್ನು ಬಂಡವಾಳ ಮಾಡಿರುವ ಕಳ್ಳ ಜ್ಯೋತಿಷಿಗಳು, ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಹೀಗಾಗಿ ಜ್ಯೋತಿಷಿಗಳನ್ನು ಗ್ರಾಹಕ ಕಾಯ್ದೆಯ ಅಡಿಯಲ್ಲಿ ತರಬೇಕು ಎಂದು ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಒತ್ತಾಯಿಸಿದ್ರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...