ಜ್ಯೋತಿಷ್ಯಕ್ಕೆ ಶರಣಾದ ಗೌಡರ ಕುಟುಂಬ

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2007 (15:20 IST)

ಜೆಡಿಎಸ್ ವರಿಷ್ಠ ದೇವೇಕುಟುಂಬದವರಿಗೆ ದೇವರ ಭಕ್ತಿ ಹೆಚ್ಚು. ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ. ಹಾಗಾಗಿ ತೊಂದರೆ ಎದುರಾಗಲಿ, ಎದುರಾಗದಿರಲಿ, ಜ್ಯೋತಿಷ್ಯರನ್ನು ಕಾಣುವುದು ಅವರ ಕುಟುಂಬದವರ ವಾಡಿಕೆ.

ಹೀಗಾಗಿ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದರಿಂದ ಖ್ಯಾತ ಜ್ಯೋತಿಷಿ ಸೋಮಯಾಜಿ ಅವರನ್ನು ಭೇಟಿ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಾರೆ. ನಿಧಾನವಾಗಿ ಪ್ರಧಾನಿ ಹುದ್ದೆಯನ್ನು ಅಲಂಕರಿಸುತ್ತಾರೆ ಎಂಬದು ಜ್ಯೋತಿಷಿ ಸೋಮಯಾಜಿ ಹೇಳಿರುವ ಜ್ಯೋತಿಷ್ಯ.

ಬುಧವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುರುಘ ರಾಜೇಂದ್ರ ಶರಣರನ್ನು ಭೇಟಿ ನೀಡಿ ಆಶಿರ್ವಾದ ಪಡೆದಿದ್ದಾರೆ.

ಚುನಾವಣೆಗೆ ಜೆಡಿಎಸ್ ಸಜ್ಜು: ಈ ನಡುವೆ ನಮ್ಮ ಮುಂದಿರುವುದು ಚುನಾವಣೆ ಹೊರತುಪಡಿಸಿ ಇನ್ನೇನಿಲ್ಲ ಎಂದು ದೇವೇಗೌಡರು ಹೇಳುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕುದುರೆ ವ್ಯಾಪಾರ ಮಾಡುವುದಿಲ್ಲ ಎಂದು ಧರಂಸಿಂಗ್ ಹೇಳಿದ್ದಾರೆ. ಮೋಸ, ವಂಚನೆ ಎಂದು ಪರಸ್ಪರ ಕಿತ್ತಾಡಿದ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಬಂಗಾರಪ್ಪ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...