ಡಿಕೆಶಿ, ಬೇಗ್‌ಗೆ ಮಾತ್ರ ಸಚಿವ ಸ್ಥಾನ: ಕಾಂಗ್ರೆಸ್ ಶಾಸಕರಲ್ಲಿ ಭುಗಿಲೆದ್ದ ಅತೃಪ್ತಿ

ವೆಬ್‌ದುನಿಯಾ|
PR
PR
ಬೆಂಗಳೂರು: ವಿಸ್ತರಣೆಗೆ ಕಾಂಗ್ರೆಸ್ ಮುಂದಾಗಿದ್ದು, ಡಿಕೆಶಿ ಮತ್ತು ರೋಷನ್ ಬೇಗ್ ಅವರಿಗೆ ಮಾತ್ರ ನೀಡಲು ನಿರ್ಧರಿಸಿರುವುದು ಅನೇಕ ಮಂದಿ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿದೆ. ಸಚಿವ ಸ್ಥಾನ ನೀಡದಿರುವ ಬಗ್ಗೆ ಕೋಪಗೊಂಡ ಇಬ್ಬರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಆದರೆ ಪ್ರಾತಿನಿಧ್ಯ ಇಲ್ಲದ ಜಿಲ್ಲೆಗಳ ಶಾಸಕರನ್ನು ಪರಿಗಣಿಸಿಲ್ಲ. ಸಂತೋಷ್ ಲಾಡ್ ಅವರನ್ನು ಕೈಬಿಟ್ಟಿರುವುದಕ್ಕೂ ಉತ್ತರಿಸಬೇಕಾಗುತ್ತದೆ ಎಂದು ರಾಣೆಬೆನ್ನೂರು ಕಾಂಗ್ರೆಸ್ ಶಾಸಕ ಕೋಳಿವಾಡ ಖಡಕ್ಕಾಗಿ ಹೇಳಿದ್ದಾರೆ. ಜನ ಇದನ್ನು ಕೂಡ ಯೋಚಿಸುತ್ತಾರೆ. ಜನರೇ ಈ ಬಗ್ಗೆ ತೀರ್ಮಾನಿಸ್ತಾರೆ. ಲೋಕಸಭೆ ಚುನಾವಣೆಯಲ್ಲಿ ಇದಕ್ಕೆ ನೀವು ಬೆಲೆ ತೆರಬೇಕಾಗುತ್ತದೆ ಎಂದು ಕೋಳಿವಾಡ ಎಚ್ಚರಿಸಿದರು.


ಇದರಲ್ಲಿ ಇನ್ನಷ್ಟು ಓದಿ :