ಪಾರದರ್ಶಕ ಆಡಳಿತ ಎಲ್ಲಿದೆ ತೋರ್ಸಿ: ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು|
ವೆಬ್ದುನಿಯಾ|
Last Modified ಗುರುವಾರ, 30 ಜನವರಿ 2014 (11:10 IST)
PR
PR
ವಿಧಾನಸಭೆ ಅಧಿವೇಶನದ ಕೊನೆ ದಿನವಾದ ಇಂದು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಸರ್ಕಾರದ ಆಡಳಿತ ವೈಖರಿ ವಿರುದ್ಧ ಹರಿಹಾಯ್ದರು. ಆಡಳಿತದಲ್ಲಿ ಪಾರದರ್ಶಕತೆ ಇಲ್ಲವೆಂದು ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು. ಪಾರದರ್ಶಕ ಆಡಳಿತ ಎಂದು ಸಿದ್ದು ಹೇಳಿಕೊಳ್ತಾರೆ. ಆದರೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡ್ತಿಲ್ಲ. ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸರ್ಕಾರದ ಆಡಳಿತಯಂತ್ರ ಕುಸಿದಿದೆ ಎಂದು ಕುಮಾರಸ್ವಾಮಿ ಹೇಳಿದರು. 8 ತಿಂಗಳಾದರೂ ಸರ್ಕಾರ ಬಂದಿರುವ ಭಾವನೆ ಕಾಣ್ತಾಇಲ್ಲ.