ಪ್ರೇಮಿ ಕೈಕೊಟ್ಟು ಪರಾರಿಯಾದಾಗ ಮನೆಯ ಮುಂದೆ ಧರಣಿ ಕುಳಿತಳು!

ವೆಬ್‌ದುನಿಯಾ| Last Modified ಶನಿವಾರ, 21 ಡಿಸೆಂಬರ್ 2013 (11:45 IST)
PR
PR
ಕೊಪ್ಪಳ: ವಿವಾಹವಾಗಿದ್ದರೂ ಪರಪುರುಷನನ್ನು ಪ್ರೀತಿಸಿ ಅವನ ಜತೆ ವಾಸವಿದ್ದ ಮಹಿಳೆಯೊಬ್ಬಳಿಗೆ ಅವನೂ ಕೈಕೊಟ್ಟು ಪರಾರಿಯಾಗಿದ್ದರಿಂದ ದಿಕ್ಕುತೋಚದೇ ಪ್ರೇಮಿಯ ಮನೆಯ ಮುಂದೆ ಧರಣಿ ಕುಳಿತ ಪ್ರಸಂಗ ವರದಿಯಾಗಿದೆ. ಎಂಬವರ ಜತೆ ಅನ್ನಪೂರ್ಣಳ ವಿವಾಹವಾಗಿತ್ತು. ದಾಂಪತ್ಯ ಜೀವನ ಸುಗಮವಾಗಿ ಸಾಗಿದ್ದಾಗಲೇ ವೀರೇಶ್ ಎಂಬ ಯುವಕ ಎಂಟ್ರಿ ಕೊಟ್ಟು ಅವರ ದಾಂಪತ್ಯದಲ್ಲಿ ಬಿರುಕು ಸೃಷ್ಟಿಸಿದ. ಸದಾ ಅಣ್ಣಪೂರ್ಣಳಿಗೆ ನಾನು ನಿನ್ನನ್ನು ಪ್ರೀತಿಸುವುದಾಗಿ ಹೇಳುತ್ತಿದ್ದ. ಸದಾ ಅವಳ ಜತೆ ಮಾತನಾಡಲು ಯತ್ನಿಸುತ್ತಿದ್ದ. ಒಂದು ದಿನ ಅನ್ನಪೂರ್ಣಳ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದ. ಕೊನೆಗೆ ಹೇಗೋ ಅನ್ನಪೂರ್ಣಳನ್ನು ಬುಟ್ಟಿಗೆ ಹಾಕಿಕೊಂಡ ವೀರೇಶ್ ಸದಾ ಅವಳ ಜತೆ ಸಂಪರ್ಕ ಸಾಧಿಸಿದ್ದ.


ಇದರಲ್ಲಿ ಇನ್ನಷ್ಟು ಓದಿ :