ಬಂಡೆ ಸಾವಿನ ಸುತ್ತ ಹರಿದಾಡುತ್ತಿವೆ ಪಿತೂರಿಯ ಸಿದ್ಧಾಂತಗಳು
ವೆಬ್ದುನಿಯಾ|
Last Modified ಗುರುವಾರ, 16 ಜನವರಿ 2014 (17:07 IST)
PR
PR
ಗುಲ್ಬರ್ಗಾ: ಪೊಲೀಸ್ ಸಬ್ ಇನ್ಸ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಸುತ್ತ ಪಿತೂರಿಯ ಸಿದ್ಧಾಂತಗಳು ಗುಲ್ಬರ್ಗಾದಲ್ಲಿ ಹರಿದಾಡುತ್ತಿವೆ. ಸರ್ಕಾರ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಿಲ್ಲ ಎಂದು ಪ್ರತಿಭಟಿಸಿರುವ ಜನರು ಸಿಬಿಐ ತನಿಖೆಗೆ ಆಗ್ರಹಿಸಿದೆ. ಬಂಡೆ ಅವರು ರೌಡಿ ಮುನ್ನಾ ಜತೆ ಶೂಟ್ಔಟ್ನಲ್ಲಿ ತಲೆಯೊಳಗೆ ಗುಂಡು ಹೊಕ್ಕು ಮೃತಮಟ್ಟಿದ್ದಾರೆ. ಐಜಿಪಿ ವಜೀರ್ ಅಹ್ಮದ್ ಮುನ್ನಾ ಮೇಲೆ ಗುಂಡು ಹಾರಿಸದಂತೆ ಆದೇಶ ನೀಡಿದ್ದರು ಎಂದು ಪ್ರತಿಭಟನಾಕಾರರ ಗುಂಪೊಂದು ಆರೋಪಿಸಿದೆ. ಈ ಕ್ರಮದ ಹಿಂದಿನ ಉದ್ದೇಶದ ಬಗ್ಗೆ ಅವರು ಅನುಮಾನಗಳನ್ನು ಹುಟ್ಟು ಹಾಕಿದ್ದಾರೆ. ಬಂಡೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆಯ ಪಿಎಸ್ಐ ಆಗಿದ್ದರು.