ಬಾಲಕಿಯ ಪ್ರೇಮಿ ಸೇರಿ ನಾಲ್ವರಿಂದ ಗ್ಯಾಂಗ್ ರೇಪ್

ವೆಬ್‌ದುನಿಯಾ|
ಬೆಂಗಳೂರು: ಬಾಲಕಿಯ ಪ್ರೇಮಿ ಸೇರಿದಂತೆ ನಾಲ್ವರು ದುಷ್ಕರ್ಮಿಗಳು ಬೆಂಗಳೂರಿನ ಇಸ್ಲಾಂಪುರದ ಬಾಲಕಿಯ ಮನೆ ಬಳಿ ಅವಳ ಮೇಲೆ ಮಾಡಿದ ದಾರುಣ ಘಟನೆ ವರದಿಯಾಗಿದೆ. ಕಳೆದ ವಾರ ಈ ಘಟನೆ ನಡೆದಿದ್ದು ಭಾನುವಾರ ಬಾಲಕಿ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ತನ್ನ ಸ್ನೇಹಿತರಿಗೆ ಪರಿಚಯಿಸುವುದಾಗಿ ಹೇಳಿ ನಿರ್ಜನ ಸ್ಥಳಕ್ಕೆ ಬಾಲಕಿಯನ್ನು ಅವಳ ಪ್ರೇಮಿ ಕರೆದುಕೊಂಡು ಹೋದ. ಇನ್ನೂ ಮೂವರು ಅಲ್ಲಿಗೆ ಬಂದಕೂಡಲೇ 16 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಮಾಡಿದರು. ಅತ್ಯಾಚಾರ ಮಾಡಿದ ಕೋಣೆಯು ಅವರ ಪೈಕಿ ಒಬ್ಬನಿಗೆ ಸೇರಿತ್ತು. ಬಾಲಕಿ ಸರಿಯಾಗಿ ಊಟ ಮಾಡದೇ, ಮಾತನಾಡದೇ ಸಪ್ಪೆಮುಖದಲ್ಲಿ ಇದ್ದಿದ್ದನ್ನು ನೋಡಿದ ಬಾಲಕಿ ತಾಯಿ ಏನಾಯಿತೆಂದು ಪದೇ ಪದೇ ಪ್ರಶ್ನಿಸಿದಾಗ ಬಾಲಕಿ ತಾನು ಅನುಭವಿಸಿದ ನರಕಯಾತನೆಯನ್ನು ವಿವರಿಸಿದ ಬಳಿಕ ತಂದೆ, ತಾಯಿ ಪೊಲೀಸರಿಗೆ ದೂರು ನೀಡಿದರು.


ಇದರಲ್ಲಿ ಇನ್ನಷ್ಟು ಓದಿ :