ವೆಬ್ದುನಿಯಾ|
Last Modified ಗುರುವಾರ, 9 ಜನವರಿ 2014 (12:24 IST)
PR
PR
ಬೆಂಗಳೂರು: ಬಿಜೆಪಿಯನ್ನು ತೊರೆದು ಕೆಜೆಪಿಯನ್ನು ಕಟ್ಟಿದ ಒಂದೂವರೆ ವರ್ಷಗಳ ನಂತರ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಎಸ್ವೈ ಜತೆಗೆ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಸಚಿವೆ ಶೋಭಾ ಕರಾಂದ್ಲಜೆ, ಮೂವರು ಶಾಸಕರು, ಕೆಜೆಪಿ ರಾಜ್ಯ ಪದಾಧಿಕಾರಿಗಳು, ಕೆಜೆಪಿ ಜಿಲ್ಲಾಧ್ಯಕ್ಷರು ಯಡಿಯೂರಪ್ಪನವರಿಗೆ ಸಾಥ್ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಯಡಿಯೂರಪ್ಪನವರಿಗೆ ಪ್ರಾಥಮಿಕ ಸದಸ್ಯತ್ವದ ಅರ್ಜಿಯನ್ನು ನೀಡಿದರು. 11 ಗಂಟೆಗೆ ಬಿಜೆಪಿಯ ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದರು.ಮರುಸೇರ್ಪಡೆಯಾದ ಹಿನ್ನೆಲೆಯಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಯಡಿಯೂರಪ್ಪ ಸಲ್ಲಿಸಿದರು.