Widgets Magazine

ಬಿಜೆಪಿಯತ್ತ ಸಿಂಧ್ಯಾ ಒಲವು, ರಾಜೂಗೌಡ 28ರಂದು ಬಿಜೆಪಿಗೆ

ಬೆಂಗಳೂರು| ವೆಬ್‌ದುನಿಯಾ| Last Modified ಶನಿವಾರ, 22 ಫೆಬ್ರವರಿ 2014 (11:35 IST)
PR
PR
ಬಿಜೆಪಿಯತ್ತ ಪಿ.ಜಿ.ಆರ್. ಸಿಂಧ್ಯಾ ಒಲವು ತೋರಿಸಿದ್ದಾರೆಂದು ತಿಳಿದುಬಂದಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ರಾಷ್ಟ್ರೀಯ ಬಿಜೆಪಿ ನಾಯಕರೊಂದಿಗೆ ಒಂದು ಸುತ್ತಿನ ಚರ್ಚೆಯನ್ನು ಅವರು ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಿಂಧ್ಯಾ ಅವರಿಗೆ ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ತಿಳಿದು ಬಿಜೆಪಿಗೆ ಸೇರುವುದಕ್ಕೆ ಒಲವು ತೋರಿದ್ದಾರೆ. ಬಿಜೆಪಿಗೆ ಸೇರಿದರೆ ತಮ್ಮ ರಾಜಕೀಯ ಭವಿಷ್ಯ ಚೆನ್ನಾಗಿರಬಹುದು ಎಂದು ತಮ್ಮ ಆಪ್ತವಲಯದಲ್ಲಿ ಅನಿಸಿಕೆ ತೋಡಿಕೊಂಡಿದ್ದರು. ಮಾಜಿ ಸಚಿವ ಕೂಡ ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆಂಬ ಸುದ್ದಿ ಬಂದಿದೆ. ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆಗೆ ಏರುವ ಅವಕಾಶ ಹೆಚ್ಚಾಗಿರುವುದರಿಂದ ಬಿಜೆಪಿಗೆ ಸೇರಿದರೆ ತಮ್ಮ ರಾಜಕೀಯ ಭವಿಷ್ಯ ಹಸನಾಗಿರುತ್ತದೆ ಎಂದು ಅನೇಕ ಜೆಡಿಎಸ್ ನಾಯಕರು ಭಾವಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :