ವೆಬ್ದುನಿಯಾ|
Last Modified ಬುಧವಾರ, 9 ಏಪ್ರಿಲ್ 2014 (11:42 IST)
PR
PR
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರ ಚಿತ್ರನಟ ದರ್ಶನ್ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಮಾಗಡಿ ರಸ್ತೆಯ ಕೆಪಿ ಅಗ್ರಹಾರದಲ್ಲಿ ನಡೆದ ರೋಡ್ ಶೋನಲ್ಲಿ ದರ್ಶನ್ ಭಾಗವಹಿಸಿ ಪಿ.ಸಿ. ಮೋಹನ್ ಪರ ಮತ ಯಾಚನೆ ಮಾಡಿದರು. ಪಿ.ಸಿ. ಮೋಹನ್ ಅವರು 6 ತಿಂಗಳ ಹಿಂದೆ ತಮ್ಮನ್ನು ಸಂಪರ್ಕಿಸಿ ಪ್ರಚಾರಕ್ಕೆ ಕರೆದಿದ್ದರು. ಆದರೆ ತಾವು ರಾಜಕೀಯಕ್ಕೆ ಇಳಿಯುವುದಿಲ್ಲ ಮತ್ತು ರಾಜಕೀಯ ಒಗ್ಗುವುದಿಲ್ಲ ಎಂದು ದರ್ಶನ್ ಹೇಳಿದ್ದಾರೆ.