ವೆಬ್ದುನಿಯಾ|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಸಂಸದ ಡಿ.ಬಿ.ಚಂದ್ರೇಗೌಡ ಬಿಜೆಪಿ ಧೋರಣೆಯನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಬಿಜೆಪಿಯನ್ನು ತೊರೆಯುವ ಎಲ್ಲ ಲಕ್ಷಣವನ್ನು ತೋರಿಸಿದ್ದಾರೆ. ಪಕ್ಷದಲ್ಲಿ ಯಾರೊಬ್ಬರಿಗೂ ಸಂಸದೀಯ ನಡವಳಿಕೆ ಬಗ್ಗೆ ತಿಳಿದಿಲ್ಲ. ನಾನು ಸ್ವಾಭಿಮಾನಿ, ಯಾರೊಂದಿಗೂ ಟಿಕೆಟ್ಗೆ ಅಂಗಲಾಚಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ನಾನು ಸಹಿಸೋಲ್ಲ ಎಂದು ಸದಾನಂದ ಗೌಡರ ಭೇಟಿ ಬಳಿಕ ಚಂದ್ರೇಗೌಡರು ಈ ಮಾತನ್ನು ಹೇಳಿದ್ದಾರೆ. ರಾಜ್ಯನಾಯಕರು ಹಿರಿಯ ನಾಯಕರನ್ನು ಕಡೆಗಣಿಸುವ ಬಗ್ಗೆ ಚಂದ್ರೇಗೌಡ ಆಕ್ರೋಶಗೊಂಡಿದ್ದಾರೆ. ನಾನು ಅಭ್ಯರ್ಥಿಯಾದರೆ ಬೆಂಬಲಿಸಿ ಎಂದಿದ್ದೇನೆ.