ಮಜಗೆ ಭೇಟಿ ನೀಡ್ದಾಗ ಬಿಬಿಎಂಪಿಯಲ್ಲಿ ಒಂದು ನಾಯಿ ಕೂಡ ಇರ್ಲಿಲ್ವಂತೆ

ಶನಿವಾರ, 18 ಜನವರಿ 2014 (16:02 IST)

PR
PR
ಬೆಂಗಳೂರು: ಬಿಬಿಎಂಪಿ ಕಚೇರಿಗೆ ಮಜಗೆ ದಿಢೀರ್ ಭೇಟಿನೀಡಿದಾಗ ಯಾವೊಬ್ಬ ಅಧಿಕಾರಿಯೂ ಬಿಬಿಎಂಪಿ ಕಚೇರಿಯಲ್ಲಿ ಇಲ್ಲದಿರುವುದನ್ನು ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಚೇರಿಗೆ ಗೈರಾದ ಅಧಿಕಾರಿಗಳಿಗೆ ಇಂದೇ ನೋಟಿಸ್ ನೀಡುವುದಾಗಿ ತಿಳಿಸಿದರು. .ಅಧಿಕಾರಿಗಳ ವಿರುದ್ಧ ಗಿರಿನಗರ ಕಾರ್ಪೊರೇಟರ್ ಲಲಿತಾ ಕೂಡ ದೂರು ನೀಡಿ ತಮ್ಮ ವಾರ್ಡ್ ಕೆಲಸಗಳನ್ನು ಮಾಡಿಕೊಡುವುದಿಲ್ಲವೆಂದು ದೂರಿದರು. ಸೈಯದ್ ಅಬ್ದುಲ್ ರಜ್ವಿ ಅವರ ಕಚೇರಿ ಬಳಿ ಸ್ವಲ್ಪ ಹೊತ್ತು ನಿಂತಿದ್ದ ಅವರು ಅಧಿಕಾರಿಗಳು ಗೈರುಹಾಜರಾಗಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ತಾವು ಕಚೇರಿಗೆ ಬಂದ ಸಂದರ್ಭದಲ್ಲಿ ಒಂದು ನಾಯಿ ಕೂಡ ಬಿಬಿಎಂಪಿ ಹೊರಗೆ ಇರಲಿಲ್ಲವೆಂದು ಅವರು ಸೂಚ್ಯವಾಗಿ ಹೇಳಿದರು.

ನಂತರ ಕಡತಗಳು ವಿಲೇವಾರಿಯಾಗದೇ ಉಳಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರು ಕೂಡ ಕೆಲಸಮಾಡಿಕೊಡಲು ಲಂಚ ಕೇಳ್ತಾರೆ ಎಂದು ದೂರಿದಾಗ ನಮಗೆ ಮಾಹಿತಿ ನೀಡಿ, ಲಂಚ ಕೇಳುವವರನ್ನು ವಜಾ ಮಾಡ್ತೇವೆ ಎಂದು ಮಜಗೆ ಹೇಳಿದರು. ಕಚೇರಿಗೆ ಯಾಕೆ ಬಂದಿಲ್ಲ ಎಂದು ಸಮರ್ಪಕ ಉತ್ತರ ನೀಡಿದರೆ ಸರಿ. ಇಲ್ಲದಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಜಗೆ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...