ಮತದಾರರಿಗೆ ಆಮಿಷ: ಅಭ್ಯರ್ಥಿಗಳ ಬೆಂಬಲಿಗರಿಂದ ಕೋಟಿ ಹಣ ವಶ

ಬೆಂಗಳೂರು| ರಾಜೇಶ್ ಪಾಟೀಲ್| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಭಾರೀ ಪ್ರಮಾಣದಲ್ಲಿ ಮತದಾರರಿಗೆ ಆಮಿಷ ಒಡ್ಡುವ ಮುನ್ಸೂಚನೆ ಲಭಿಸಲಾರಂಭಿಸಿದೆ. ಇನ್ನೂ ಎಲ್ಲರೂ ನಾಮಪತ್ರವನ್ನೇ ಸಲ್ಲಿಸಿಲ್ಲ. ಆಗಲೇ ರಾಜ್ಯದಲ್ಲಿ ಚುನಾವಣೆಗಾಗಿ ಬಳಸಲು ಉದ್ದೇಶಿಸಿದ್ದ 1.44 ಕೋಟಿ ಮೊತ್ತದ ನಗದು, ವಸ್ತು ವಶಪಡಿಸಿಕೊಳ್ಳಲಾಗಿದೆ. ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹಣದ ಆಮಿಷವೊಡ್ಡುವ ಸಾಧ್ಯತೆ ಬಗ್ಗೆ ಚುನಾವಣಾ ಆಯೋಗ ಕೂಡ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ನಿಗಾ ವಹಿಸಲು ಸಿದ್ಧತೆ ನಡೆಸಿದೆ.
ಅಗಡಿ ಕ್ರಾಸ್
ಮುಂದುವರಿದ ಸೀರೆ ರಾಜಕೀಯ


ಇದರಲ್ಲಿ ಇನ್ನಷ್ಟು ಓದಿ :