ಮುಂಬಾಗ್ಲಿಂದ ಒಳಬಂದ ಈಶ್ವರಪ್ಪ ಹಿಂಬಾಗ್ಲಿಂದ ಹೋದ್ರು

ಬಳ್ಳಾರಿ| ವೆಬ್‌ದುನಿಯಾ| Last Modified ಶನಿವಾರ, 30 ನವೆಂಬರ್ 2013 (16:36 IST)
PR
PR
ಬಿಜೆಪಿಯಯನ್ನು ಪ್ರಮುಖ ನಾಯಕರು ತೊರೆದುಹೋದ ಮೇಲೆ ದುರ್ಬಲವಾಗಿರುವ ರಾಜ್ಯ ಬಿಜೆಪಿಗೆ ಮತ್ತೆ ಚೈತನ್ಯ ತುಂಬಲು ರಾಜ್ಯ ಬಿಜೆಪಿ ನಾಯಕರು ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ತೊರೆದುಹೋದ ಮುಖಂಡರನ್ನು ಮತ್ತೆ ಬಿಜೆಪಿಗೆ ಆಹ್ವಾನಿ ಬಿಜೆಪಿಗೆ ಬಲ ತುಂಬುವುದಾಗಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ-ಶ್ರೀರಾಮುಲು ಭೇಟಿ ಕುತೂಹಲ ಮೂಡಿಸಿದೆ. ರೇಣುಕಾಚಾರ್ಯ ನಗರದಲ್ಲಿರುವ ಜಿಲ್ಲಾಧ್ಯಕ್ಷ ಗುರುಲಿಂಗನ ಗೌಡ ನಿವಾಸದಲ್ಲಿ ಈ ಭೇಟಿ ನಡೆಯಿತು. ಸುಮಾರು ಅರ್ಧ ಗಂಟೆಗಳ ಕಾಲ ಇವರಿಬ್ಬರು ಮಾತುಕತೆ ನಡೆಸಿದ್ದಾರೆ. ಶ್ರೀರಾಮುಲು ಕಳೆದ ತಿಂಗಳು ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ಊಹಾಪೋಹ ಹರಡಿತ್ತು.


ಇದರಲ್ಲಿ ಇನ್ನಷ್ಟು ಓದಿ :